ಪರಿಕಲ್ಪನೆ :
ಆತ್ಮೋದ್ಧಾರದ ದಿಶೆಯಲ್ಲಿ ಪರಿಕ್ರಮಿಸಿ ಆಂತರಿಕವಾಗಿ ಬೆಳೆದಾಗ ಮಾತ್ರ ನಿಜವಾದ ಆನಂದ, ವ್ಯಕ್ತಿ ವಿಕಸನ ಸಾಧ್ಯ. ‘ಶಂಗಾ’ ಪ್ರತಿಷ್ಠಾನವು ಅಧ್ಯಾತ್ಮಿಕ ಜ್ಞಾನ ಹಾಗು ಯೋಗ ಜ್ಞಾನದ ಕಲಿಕಾ ಕೇಂದ್ರವಾಗಲು ಹೆಜ್ಜೆ ಇಟ್ಟಿದೆ. ಮಕ್ಕಳಿಗೆ, ಯುವಕರಿಗೆ ಮತ್ತು ಇಡೀ ಸಮಾಜಕ್ಕೆ ನಿರಂತರ ನಿಜ ಆನಂದದ ಸವಿಯನ್ನು ನೀಡುವ ಘನ ಉದ್ದೇಶ್ಯ ಹೊಂದಿ ದಾರಿ ದೀವಿಗೆಯಾಗಲು ನಿಶ್ಚಯಿಸಿದೆ. ಇದಲ್ಲದೇ, ಪ್ರತಿಷ್ಠಾನವು ಸಮಾಜ ಸೇವೆಗೆ ಕಟಿಬದ್ಧವಾಗಿದೆ.
ಧ್ಯೇಯ :
ಎಲ್ಲಾ ಜೀವಿಗಳು ಸರ್ವಮಾನ್ಯ ಅರಿವಿನ ಬಿಂಬವು ಹಾಗು ಶಾಶ್ವತ ಶಕ್ತಿಯ ಅಭಿವ್ಯಕ್ತಿಯಾಗಿವೆ.
ಮಾನವರು ದೈನಂದಿನ ಜೀವನದಲ್ಲಿ ತಮ್ಮದೇ ಆದ ಆಚಾರ ವಿಚಾರಗಳ ಸುಳಿಗೆ ಸಿಲುಕಿ, ಲೌಕಿಕ ಪ್ರಪಂಚದಲ್ಲಿ ತಾವು ಮಾಡುತ್ತಿರುವುದೇ ಸರಿಯಾದ ಕಾರ್ಯ ಸಾಧನೆ ಎಂದು ಅದರಲ್ಲೇ ತೊಡಗಿಕೊಂಡು ನೀರಸ ಬದುಕನ್ನು ಸಾಗಿಸುತ್ತಿದ್ದಾರೆ. ಹಾಗು ಆ ಲೌಕಿಕ ಭೌತಿಕ ಕಾರ್ಯ ಸಾಧನೆಗಳಿಂದಲೇ ತಮಗೆ ಎಲ್ಲಾ ಸಂತೋಷ ಪ್ರಾಪ್ತಿಯಾಗುತ್ತದೆ ಹಾಗು ಅದೇ ಅರ್ಥಪೂರ್ಣ ಬದುಕು ಎಂದು ನಂಬಿ, ಕನಸಿನ ಕುದುರೆಯೇರಿ ಹೊರಟಿದ್ದಾರೆ. ಸಂತೋಷವು ತಮ್ಮ ಆಂತರ್ಯದಲ್ಲಿಯೇ ಇದೆ ಎಂಬ ಅರಿವು ಇಲ್ಲದೇ, ಬಾಹ್ಯದಲ್ಲಿ ಹುಡುಕಾಡುತ್ತಿದ್ದಾರೆ. ಈ ಕ್ರಿಯೆಯಿಂದ ಸಿಗುತ್ತಿರುವುದು ಕೇವಲ ತಾತ್ಕಾಲಿಕ ಸಂತೋಷ ಹಾಗು ನಿರಂತರ ದು:ಖ, ನಿರಾಸೆ. ಶ್ರೀಶಂಗಾ ಪ್ರತಿಷ್ಠಾನವು ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳುವ ಜ್ಞಾನವನ್ನು ವೇದ ತರಗತಿಗಳು, ಯೋಗ ತರಗತಿಗಳು, ಉಪನ್ಯಾಸ ಸತ್ರ ಹಾಗು ಸಮಾಜ ಸೇವೆ ಇವುಗಳನ್ನು ಆಯೋಜಿಸುವ ಮುಖಾಂತರ ನೀಡುತ್ತದೆ. ಪ್ರತಿಷ್ಠಾನದ ಎಲ್ಲಾ ಚಟುವಟಿಕೆಗಳು, ತಕ್ಕೆಗೆ ಬರುವ ಎಲ್ಲಾ ಸದಸ್ಯರುಗಳಿಗೆ ನೆಮ್ಮದಿ ಜೀವನ ಹಾಗು ಪರಮಾನಂದದ ಅನುಭಾವದೆಡೆಗೆ ಒಯ್ಯುತ್ತದೆ.
ಉದ್ದೇಶ್ಯ ಮತ್ತು ಚಟುವಟಿಕೆ :
ಭಗವದ್ಗೀತೆ, ವೇದ ಉಪನಿಷತ್ತು, ಪುರಾಣಗಳ ತತ್ವ ಸಂದೇಶ ಸಾರವನ್ನು ಹರಡುವುದು. ಧರ್ಮ ವಿಚಾರಗಳನ್ನು ಒಳಗೊಂಡ ಅನೇಕ ವಿದ್ವಾಂಸರುಗಳು ರಚಿಸಿರುವ ಗ್ರಂಥಗಳ ಅವಲೋಕನ ಹಾಗು ಧರ್ಮ ಪ್ರವರ್ತಕತೆ.
ನಮ್ಮ ಸನಾತನ ಸಂಸ್ಕೃತಿ ಹಾಗು ಪುರಾತನ ಪರಂಪರೆ, ಜೀವನ ಶೈಲಿಯ ರಕ್ಷಣೆಗಾಗಿ, ಯೋಗ, ಪ್ರಾಣಾಯಾಮ ಹಾಗು ಧ್ಯಾನದ ವಿದ್ಯೆಯನ್ನು ನೀಡುವುದು.
ಎಲ್ಲರಲ್ಲಿಯೂ ನಿಜವಾದ ಜ್ಞಾನ ಅಂದರೆ ‘ಬ್ರಹ್ಮ ಜ್ಞಾನದ’ ಅರಿವನ್ನು ಯಾವುದೇ ವಿಧವಾದ ತಾರತಮ್ಯವಿಲ್ಲದೆ, ಜಾತಿ ಮತ ಲಿಂಗ ಭೇದವಿಲ್ಲದೆ, ಮೂಡಿಸುವುದು.
ಮಹಿಳೆಯರಿಗಾಗಿ, ಮಕ್ಕಳಿಗಾಗಿ ಹಾಗು ಹಿರಿಯ ನಾಗರೀಕರಿಗೆ ಜೀವನದಲ್ಲಿ ಉತ್ಸಾಹ ಉಲ್ಲಾಸ ಮೂಡಿಸುವ ದಿಶೆಯಲ್ಲಿ ಆಧ್ಯಾತ್ಮಿಕ ಸತ್ಸಂಗವನ್ನು ಆಯೋಜಿಸುವುದು.
ಅನೇಕ ವಿಧ ನ್ಯೂನತೆಗಳಿಂದ, ಅಂಗವೈಕಲ್ಯದಿಂದ ಬಳಲುತ್ತಿರುವ ಜನರಿಗೆ ಸೂಕ್ತ ಜ್ಞಾನ /ಪುನರ್ವಸತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು.
ಮಹಿಳಾ ಸಬಲೀಕರಣದ ಬಗ್ಗೆ ವಿಶೇಷವಾದ ಕಾರ್ಯಕ್ರಮ ಆಯೋಜಿಸುವುದು.
ಸಮಾಜದಲ್ಲಿ ಅನೇಕ ನ್ಯೂನತೆಗಳಿಗೆ ಒಳಗಾಗಿರುವ ಬಡ ಜನರಿಗೆ ಆಧುನಿಕ ತಂತ್ರ ಜ್ಞಾನದ ಸಹಾಯ ಹಸ್ತ ನೀಡುವುದು.
ಸರ್ಕಾರ ಹಾಗು ಖಾಸಗಿ ಉದ್ಯಮದವರೊಡನೆ ಮಧ್ಯಸ್ಥಿಕೆವಹಿಸಿ, ನಮ್ಮ ಸಮಾಜದಲ್ಲಿ ಹಲವು ನ್ಯೂನತೆಗೆ ಒಳಗಾಗಿರುವ ಜನರಿಗೆ, ಬಡತನದ ರೇಖೆ ಕೆಳಗಿರುವವರಿಗೆ, ಅಂಗವಿಕಲರಿಗೆ ನೌಕರಿ ದೊರೆಯುವಂತೆ ಮಾಡುವುದು.
ಸಮಾಜದ ಎಲ್ಲಾ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸುವುದು.
ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾವೇತನ ನೀಡುವುದು, ಪುಸ್ತಕ ತತ್ಸಂಬಂಧದ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮ ಅಯೋಜಿಸುವುದು.
ಆಧುನಿಕ ತಾಂತ್ರಿಕತೆ ಜ್ಞಾನದ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ, ಅವರು ಅದನ್ನು ದೈನಂದಿ ಜೀವನದಲ್ಲಿ ಅಳವಡಿಸಿಕೊಂಡು ‘ಡಿಜಿಟಲ್ ಭಾರತ’ ವನ್ನು ಬೆಂಬಲಿಸುವಂತೆ ಮಾಡುವುದು.
ವಿದ್ಯಾರ್ಥಿಗಳಿಗೆ ಖಾಸಗೀ ವಿದ್ಯಾ ಪಾಠವನ್ನು ಉಚಿತವಾಗಿ ಹೇಳಿಕೊಟ್ಟು, ಅವರ ಶೈಕ್ಷಣಿಕ ಹಾದಿಗೆ ನೀರೆರೆಯುವುದು.
ಧರ್ಮ ಸಹಿಷ್ಣುತೆ, ಪರಸ್ಪರ ಗೌರವ, ಸೇವಾ ಮನೋಭಾವ ಮತ್ತು ವೈವಿಧ್ಯತೆಯಲ್ಲಿ ಏಕತೆ ಭಾವ ಜನರಲ್ಲಿ ಮೂಡಿಸುವುದು.
ಆಧುನಿಕ ತಾಂತ್ರಿಕತೆ ಜ್ಞಾನದ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ, ಅವರು ಅದನ್ನು ದೈನಂದಿ ಜೀವನದಲ್ಲಿ ಅಳವಡಿಸಿಕೊಂಡು ‘ಡಿಜಿಟಲ್ ಭಾರತ’ ವನ್ನು ಬೆಂಬಲಿಸುವಂತೆ ಮಾಡುವುದು.