ಪ್ರತಿಷ್ಠಾಪನದ ಸಂಸ್ಥಾಪಕರಾದ ಡಾ|| ಮುರಳಿ ಸಿ. ಶರ್ಮ ರವರು ಪ್ರತಿಷ್ಠಾನದ ಅಧ್ಯಕ್ಷ’ರಾಗಿರುತ್ತಾರೆ. ಅವರು ವೇದಿಕ್ ಜ್ಯೋತಿಷ್ಯಶಾಸ್ತ್ರದಲ್ಲಿ ಡಾಕ್ಟರೇಟ್ (Ph.d) ಪದವಿಯನ್ನು ಗಳಿಸಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದ, ಉಪನಿಷತ್, ಭಗವದ್ಗೀತೆ, ಯೋಗ ಮತ್ತು ಭಗವತ್ಪಾದ ಶಂಕರರ ತತ್ವಗಳನ್ನು ಸತತ ಅಭ್ಯಾಸ ಮಾಡಿ, ಮೈಗೂಡಿಸಿಕೊಂಡಿದ್ದಾರೆ. ಅಸಾಧಾರಣ ನೆನಪಿನ ಶಕ್ತಿ ಹೊಂದಿರುವ ಇವರು ಕಳೆದ ಎಂಟು ವರುಷಗಳಿಂದ ವೇದ ಉಪನಿಷತ್ ಯೋಗ ತರಗತಿಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಹಾಗು ಸರಿಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಮ್ಮ ವೇದ ಪಾಠಶಾಲೆಯಲ್ಲಿ ತಯಾರು ಮಾಡಿದ್ದಾರೆ.
ಶ್ರೀ ಮುರಳಿ ಸಿ. ಶರ್ಮರವರು ಶ್ರೀ ರಾಮಕೃಷ್ಣ ಪರಮ ಹಂಸರ, ಶಾರದಾದೇವಿಯವರ ಹಾಗು ಸ್ವಾಮೀ ವಿವೇಕಾನಂದರ ಆರಾಧಕರಾಗಿದ್ದಾರೆ. ರಾಮಕೃಷ್ಣ ಮಠದ ಪರಮ ವಿದ್ಯಾರ್ಥಿಯಾಗಿ, ಅನೇಕ ಪವಿತ್ರ ಗ್ರಂಥಗಳು, ಅಧ್ಯಾತ್ಮಿಕ ಪುಸ್ತಕಗಳು, ಲೇಖನಗಳನ್ನು ಓದಿ, ಅಭ್ಯಾಸ ಮಾಡಿ. ರಾಮಕೃಷ್ಣ ಮಿಶನ್ ಹಾಗು ಚಿನ್ಮಯ ಮಿಶನ್ ರವರು ನಡೆಸುವ ಅನೇಕ ಸತ್ಸಂಗದಲ್ಲಿ ಭಾಗವಹಿಸಿ, ದಿವ್ಯತ್ರಂಯರ ಜೀವನ ಚರಿತ್ರೆ ಹಾಗು ಅನೇಕ ವಾಗ್ಮಿ ಯೋಗಿಗಳ ಅಧ್ಯಾತ್ಮಕ ಉಪನ್ಯಾಸಗಳನ್ನು ಕೇಳಿ ಪಕ್ವವಾಗಿದ್ದಾರೆ. ಮೇಲಾಗಿ ಅವರು ಭಗವತ್ಪಾದ ಶಂಕರರ ತತ್ವಗಳನ್ನು ಭೋದನೆಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಶ್ರೀ ಮುರಳಿ ಸಿ. ಶರ್ಮರವರು ಸಮಾಜಸೇವೆಯಲ್ಲಿಯೂ ಸಹ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಸಾವಿರಕ್ಕೂ ಅಧಿಕ ಬಡ, ಹಾಗು ಶೋಷಿತ ವರ್ಗದ ಜನರ, ಅಂಗವಿಕಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ತಾಂತ್ರಿಕ, ವ್ಯಕ್ತಿ ವಿಕಸನ, ಕೌಶಲ್ಯ ದ ಬಗ್ಗೆ ತರಬೇತಿಯನ್ನು ನೀಡಿ ಅವರಿಗೆ ಸಾರ್ವಜನಿಕ ಹಾಗು ಖಾಸಗಿ ಕ್ಷೇತ್ರಗಳಲ್ಲಿ ನೌಕರಿ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗಾಗಿ, ಪ್ರತಿಷ್ಟಿತ ನ್ಯಾಶನಲ್ ಪ್ರೆಸಿಡೆನ್ಸಿ ಪ್ರಶಸ್ತಿ, ನ್ಯಾಶನಲ್ ಹೆಲನ್ ಕೆಲರ್ ಪ್ರಶಸ್ತಿ ಮತ್ತು ನ್ಯಾಶನಲ್ ಫೆಡರೇಶನ್ ಕರ್ನಾಟಕದಿಂದ ರಾಜ್ಯ ಪ್ರಶಸ್ತಿ ಇವರ ಮುಡಿಗೇರಿದೆ.
ಸಮುದಾಯಕ್ಕೆ ಇವರು ಸಲ್ಲಿಸಿರುವ ಸೇವೆ ಹಾಗು ಈ ದಿಕ್ಕಿನಲ್ಲಿ ಅವರು ಕಾರ್ಯ ನಿರ್ವಹಿಸುತ್ತಿರುವ ಐ.ಬಿ.ಎಮ್ ಸಂಸ್ಥೆಯಲ್ಲಿ ತಮ್ಮ ಸಹೋದ್ಯೋಗಿಗಳನ್ನು ಪ್ರೇರೇಪಿಸಿ, ಸಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿರುವ ಶ್ರೀ ಮುರಳಿ ಸಿ. ಶರ್ಮರವರಿಗೆ “ಆನ್ ಡೆಮ್ಯಾಂಡ್ ಕಮ್ಯುನಿಟಿ ಎಕ್ಸಲೆನ್ಸ್’ ಪ್ರಶಸ್ತಿ ಯನ್ನು ಐ.ಬಿ.ಎಮ್ ಸಂಸ್ಥೆ ಮುಖ್ಯಸ್ಥರು ನೀಡಿದ್ದಾರೆ.
ಭಾರತ ದೇಶವು ಸಾಧು ಸಂತರ, ಋಷಿಮುನಿಗಳ ಭೂಮಿ. ಈ ಋಷಿಮುನಿಗಳು ಜ್ಞಾನ ಸಾಗರವನ್ನೇ ನಮ್ಮ ಸುಪರ್ದಿಗೆ ಕೊಟ್ಟು, ಮನ:ಶಾಂತಿ ಹೊಂದುವ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಶ್ರೀ ಮುರಳಿ ಸಿ. ಶರ್ಮಾರವರು ಋಷಿಮುನಿಗಳಿಂದ ದೊರಕಿರುವ ಈ ಜ್ಞಾನ ಭಂಡಾರವನ್ನು ಎಲ್ಲಾ ಸಹೃದಯ ಜನರಿಗೆ ತಲುಪಿಸಬೇಕೆಂದು ಮನದಲ್ಲೇ ಹಪಹಪಿಸುತ್ತಿರುವ ಯೋಗಿ. ‘ಸರ್ವೇ ಜನಾ: ಸುಖಿನೋ ಭವಂತು’ ಎಂಬ ವಾಣಿಯಂತೆ, ಎಲ್ಲರ ಜೀವನವೂ ಉಲ್ಲಾಸ ಭರಿತವಾಗಲೆಂದು ಆಶಿಸುವ ಹಾಗು ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿರುವ ವ್ಯಕ್ತಿ ಶ್ರೀ ಮುರಳಿ ಸಿ. ಶರ್ಮ.